ಹೆಂಡತಿಯೊಬ್ಬಳು ಮನೆಯಲ್ಲಿ ಇದ್ದರೆ ನನಗದು ಕೋಟಿ ರುಪಾಯಿ. ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ.... ಅಂತ ಕವಿ ಕೆ. ಎಸ್. ನರಸಿಂಹ ಸ್ವಾಮಿ ಯವರು ಯಾವ ಸಮಯದಲ್ಲಿ ಬರೆದರೋ ನಾ ಕಾಣೆ. ಬಹುಶಃ ಅವರದು exception ಕೇಸ್ ಇರಬೇಕು ಅಥವಾ ಅವರು ಆದಿನಾ ಒಳ್ಳೆ ಮೂಡಲ್ಲಿ ಇದ್ದಿರಬೇಕು. ಆದ್ರೆ ಹೆಂಡತಿಯೊಬ್ಬಳು ಮನೆಯಲ್ಲಿ ಇಲ್ಲದೇ ಹೋದರೆ?.... ಇದರ ಬಗ್ಗೆ ಯೋಚನೆ ಮಾಡಿದ್ದೀರಾ? ಮದುವೇ ಆಗಿ ಕೆಲವು ವರುಷ ಕಳೆದವರನ್ನು ಕೇಳಿ ನೋಡಿ? ನನಗದು ಹತ್ತು ಕೋಟಿ ರುಪಾಯಿ ಇದ್ದ ಹಾಗೆ ಅಂತ ಹೇಳದೆ ಹೋದರೆ ಕೇಳಿ. ಹೆಂಡತಿ ತವರು ಮನೆಗೆ ಹೋದಾಗ ಸಿಗುವ ಸ್ವಾತಂತ್ರ್ಯ ಇದೆಯಲ್ಲ....ಆಹಾ! ಅನುಭವಿಸಿದವರಿಗೇ ಗೊತ್ತು. ಹೆಂಡತಿ ಊರಿಗೆ ಹೋದ ದಿನಾ ಅದೊಂಥರಾ ಸೆಲೆಬ್ರಶನ್ ಮೂಡ್ ಬಂದು ಬಿಡತ್ತೆ. ಹೇಳುವವರಿಲ್ಲ, ಕೇಳುವವರಿಲ್ಲ...ಒಂದು ಥರಾ ಕಳೆದು ಹೋದ bachelorhood ಮರಳಿ ಬಂದ ಹಾಗೆ. ಆ ಮೂಡ್ ಕೂಡ ಯಜಮಾನಿಯಮ್ಮನವರು ಎಷ್ಟು ದಿನಾ ಊರಿಗೆ ಹೋಗಿದ್ದಾರೆ ಅನ್ನೋದನ್ನ ಅವಲಂಬಿಸಿರುತ್ತೆ ಅಂತ ಇಟ್ಕೊಳ್ಳಿ. ಬರೀ ಒಂದು ದಿನಾ ಅಂದರೆ ಅಂಥ ಏನು ವಿಶೇಷ ಇರೋಲ್ಲ. Atleast ಒಂದು ವಾರವಾದರೂ ಹೋಗಬೇಕು. ಇನ್ನು ಮಕ್ಕಳನ್ನು ಕರೆದುಕೊಂಡು ಬೇಸಿಗೆ ರಜಕ್ಕೆ ಹೋದರಂತೂ ಕೇಳೋದೇ ಬೇಡ...ಖುಷಿಯೋ ಖುಷಿ. ಹಲವರು ಆ ಸ್ವಾತಂತ್ರ್ಯವನ್ನು ಹಲವು ರೀತಿಯಲ್ಲಿ celebrate ಮಾಡ್ತಾರೆ. ಕೆಲವರು ಆಫೀಸೆಲ್ಲಿ ಸ್ನೇಹಿತರ ಹತ್ತಿರ ಹೇಳಿಕೊಂಡು ಅವರ ಹೊಟ್ಟೆ ಉರಿಸ್ತಾರೆ. ಅವರು ಕೂಡ ಏನಮ್ಮಾ Happy bachelor ! ಮಾಜಾ ಮಾಡು ಅಂತ ಒಳಗೊಳಗೇ ಕರುಬುತ್ತಾ ಹೇಳಲು ಸಾಕು. ಕೆಲವರು ಸ್ನೇಹಿತರನ್ನೆಲ್ಲ ಮನೆಗೆ ಕರೆದು ಗುಂಡಿನ ಪಾರ್ಟಿ ಹಾಕಿಸ್ತಾರೆ. ಇನ್ನು ಕೆಲವರು ಖುಷಿಯಾಗಿ ರಾತ್ರಿ ಶೋ ಸಿನೆಮಾಗೆ ಹೋಗ್ತಾರೆ. ಇನ್ನು ಕೆಲವರು ಆಫೀಸೆಲ್ಲಿ ಜಾಸ್ತಿ ಹೊತ್ತು ದುಡೀತಾರೆ. ಇನ್ನು ಕೆಲವರು ಇಷ್ಟ ವಾದ ನಾನ್ ವೆಜ್ ಹೋಟೆಲ್ಲಿಗೆ ಹೋಗಿ ಹೊಟ್ಟೆ ಬಿರಿಯ ಬಿರಿಯಾನಿ ತಿಂತಾರೆ...Diet yochane ilavalla ಹೀಗೆ ಒಬ್ಬಬ್ಬರದೂ ಒಂದೊಂದು ತರಹ ಸೆಲೆಬ್ರಶನ್. ಹೆಂಡತಿ ಮಕ್ಕಳು ಊರಲ್ಲಿ ಇಲ್ಲ ಅಂದರೆ ಎಷ್ಟು ಸುಖ ಸ್ವಾಮಿ. ಇದನ್ನ ನೋಡಿಯೇ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ನ್ಯ ಅಂದರೇನೋ? ದಿನಾ ಬೆಳಗ್ಗೆ ಬೇಗ ಎದ್ದು ಮಕ್ಕಳನ್ನು ಶಾಲೆಗೆ ತಯಾರು ಮಾಡುವ ಗೋಜಿಲ್ಲ. ಬಾಸ್ ಹತ್ತಿರ ಹಲ್ ಕಿರಿದು permission ತೊಗೊಂಡು ಬೇಗ ಮನೆಗೆ ಬರಬೇಕು ಅನ್ನೋ ಟೆನ್ಶನ್ ಇಲ್ಲ. ವಾರ ವಾರ ಶಾಪಿಂಗ್ ಗೆ ಹೋಗಿ ಸುಮ್ನೆ ಅಂಗಡಿ ಯಲ್ಲಿ ಕೂರುವ ಹಿಂಸೆ ಇಲ್ಲ... ಎಲ್ಲದಕ್ಕಿಂತ ಮಿಗಿಲಾಗಿ ದಿನಾ ರಾತ್ರಿ ಹೊತ್ತು ಈ ಟಿ.ವಿ ಧಾರಾವಾಹಿಗಳ ಭರಾಟೆ ಇಲ್ಲ. ಅದರಲ್ಲೂ ಹೆಂಡತಿಗೆ ಹಿಂದಿ, ತಮಿಳು ಭಾಷೆ ಬಂದರಂತೂ ಆ ದೇವರೇ ಗತಿ. ಗಂಡಂದಿರಿಗೆ ಬೇರೆ ಉಪಾಯವೇ ಇಲ್ಲ್ಲ. ಆ ಧಾರಾವಾಹಿಗಳನ್ನೆಲ್ಲಾ ನೋಡುವ ಹಿಂಸೆ. ಅದೇನೋ ಬಲವಂತ ಮಾಘ ಸ್ನಾನ ಅಂತಾರಲ್ಲ ಹಾಗೆ! ಅದರಲ್ಲೂ women oriented subject ಆದರಂತೂ ಕೇಳುವುದೇ ಬೇಡ. ಮನೆಯಲ್ಲಿ ಕಣ್ಣೀರ ಕೋಡಿ ಹರಿಯುವುದು ಖಂಡಿತ. ಹಿಂದಿಯಲ್ಲಿ ಕ್ಯುನ್ ಕಿ ಸಾನ್ಸ್ ಭಿ ಕಭಿ ಬಹು ಥಿ (ಬದ್ಬು ಥಿ?) ಬಿದಾಯಿ, ರಾಜ ಕಿ ಆಯೆಗಿ ಬಾರಾತ್..ಹೀಗೆ Continuous ಆಗಿ ಎಲ್ಲಾ Slots book ಆಗಿರತ್ತೆ. ಹಾಗೆಯೇ ತಮಿಳು ಮತ್ತು ಕನ್ನಡದಲ್ಲೂ ಈ ಕಣ್ಣೀರು ಜಾತಿಗೆ ಸೇರಿದ ಧಾರಾವಾಹಿಗಳು ಉಂಟು. ಈ ಧಾರಾವಾಹಿಗಳ ಹಾವಳಿ ಎಷ್ತಪ್ಪ ಅಂದ್ರೆ ಮನೆಯ ಹೆಂಗಸರು ತಮ್ಮ ಎಲ್ಲಾ ಕೆಲಸಗಳನ್ನು ಬೇಗ ಬೇಗ ಮುಗಿಸಿ ಸರಿಯಾದ ಸಮಯಕ್ಕೆ ಟಿ.ವಿ ಮುಂದೆ ಹಾಜರ್. ಊಟ ಕೂಡ ಧಾರಾವಾಹಿಯ ನಡುವೆ ಬರುವ ಕಮರ್ಷಿಯಲ್ ಬ್ರೇಕ್ನಲ್ಲೆ. ಒಮ್ಮೆ ನಮ್ಮ ಪರಿಚಯದವರ ಮನೆಗೆ ಏನೋ ಕೆಲಸದ ಮೇಲೆ ಹೋಗಿದ್ದೆ. ನಾನು ಹೋದ ಸಮಯ ಧಾರಾವಾಹಿಗಳ ಸ್ಲಾಟ್. ನಾನು ಅವರ ಮನೆಯೊಳಗೆ ಹೋಗುವುದಕ್ಕೂ ಆ ಮನೆಯ ಹೆಂಗಸರು ಹಾಳಾದವರು ! ಬಂದು ಬಿಟ್ರೂ! ಅಂಥ ಹೇಳೋದಕ್ಕೂ ಸರಿ ಹೋಯಿತು. ನನಗೋ ಹೇಗೆ react ಮಾಡಬೇಕು ಅಂತಾನೆ ತಿಳೀಲಿಲ್ಲ. ಆದರೂ ಹೇಗೋ ಧೈರ್ಯ ತಂದುಕೊಂಡು ಒಳಗೆ ನುಸುಳಿದೆ. ಮಾತು ಕತೆಯಲ್ಲಾ ಆದ ಮೇಲೆ ತಿಳಿಯಿತು, ಆಕೆ ಹೇಳಿದ್ದು ಆ ಧಾರಾವಾಹಿಯಲ್ಲಿ ಬಂದ ಒಂದು ಪಾತ್ರಕ್ಕೆ ಎಂದು. ಆದರೂ ಎಂಥ ಮುಜುಗರ!! ಸಬ್ಜೆಕ್ಟ್ deviate ಆಗಿ ಹೋಯಿತು. ಕ್ಷಮೆ ಇರಲಿ.
ಇದೆಲ್ಲದರ ಜಂಜಾಟವಿಲ್ಲದೆ ಕೆಲವು ದಿನಾ ಆರಾಮಾಗಿ ಇರುವ ಚಾನ್ಸ್ ಯಾರಿಗೆ ಬೇಡ? ಕೆಲವು ದಿನಗಳ ಹಿಂದೆ ನನಗೂ ಸಹ ಒಂದು ಚಾನ್ಸ್ ಸಿಕ್ಕಿತ್ತು. ಒಂದು ವಾರ ನನ್ನ ಯೆಜಮಾನಿತಿ ತವರು ಮನೆಗೆ ಹೋಗಿದ್ದಳು. ನನಗೆ ಒಂದು disadvantage. ನಾನು ಮೂಲತಹ ಮೈಸೂರಿನವನಾದರೂ ವೃತ್ತಿ ಬೆಂಗಳೂರಿನಲ್ಲಿ. ನನ್ನ ಹೆಂಡತಿಯ ತವರೂರು ಬೆಂಗಳೂರು. ಆದ್ದರಿಂದ long break ಸಿಗೋದು ಕಷ್ಟ. ಈಗ ಏನೂ ಮಾಡಕ್ಕೆ ಆಗೋಲ್ಲ ಅಂತ ಇಟ್ಕೊಳ್ಳಿ. ಇರಲಿ! ನಾನು ಆಗ ಸಿಕ್ಕ ಸಮಯವನ್ನು - ಅದೂ ನನಗೋಸ್ಕರ ಸಿಕ್ಕ ಸಮಯವನ್ನು ಚೆನ್ನಾಗಿ ಅನುಭವಿಸಬೇಕೆಂದು ತೀರ್ಮಾನ ಮಾಡಿದೆ. ದಿನಾ early ಮಾರ್ನಿಂಗ್ 8.30 am ಎದ್ದು ನಿಧಾನಕ್ಕೆ ಕಾಫೀ ಮಾಡ್ಕೊಂಡು ಪೇಪರ್ ಓದ್ತಾ ಬಿಸಿ ಬಿಸಿಯಾಗಿ ಕಾಫೀ ಹೀರುತ್ತಾ ಇದ್ದೆ. ಆಮೇಲೆ ಆಫೀಸಿಗೆ ರೆಡಿಯಾಗಿ ಗಾಂಧೀ ಬಜಾರಲ್ಲಿರೊ S. L.V ಯಲ್ಲಿ ಬಿಸಿ ಬಿಸಿ ಇಡ್ಲಿ, ವಡೆ, ಸಾಂಬಾರ್, ಚೌ ಚೌ ಬಾತ್ ಆಮೇಲೆ ಒಂದು ಫರ್ಸ್ಟ್ ಕ್ಲಾಸ್ ಕಾಫೀ ಕುಡಿದು ಆಫೀಸಿಗೆ ಹೋಗ್ತಾ ಇದ್ದೆ. (Breakfast should be like a King ಅಂತಾರಲ್ಲ ಆ ಥರಾ). ಆಮೇಲೆ ಸಂಜೆ ಆಫೀಸ್ ಕೆಲಸ ಮುಗಿಸಿಕೊಂಡು ಮತ್ತೆ S.L.V. ಯಲ್ಲಿ ಮಂಗಳೂರು ಬಜ್ಜಿ ತಿಂದು, ಕಾಫೀ ಕುಡಿದು ಮನೆ ತಲುಪಿದೆ. ಮನೆ ತಲುಪಿದ ಮೇಲೆ ಆರಾಮಾಗಿ ಕುಳಿತು ಬಹಳ ದಿನದಿಂದ ಮಾಡಲು ಸಾಧ್ಯವಾಗದೆ ಇದ್ದಂಥ ಕೆಲಸಗಳನ್ನು ಮಾಡಬೇಕೆಂದು ಡಿಸೈಡ್ ಮಾಡಿದೆ. ಬಹಳ ದಿನದಿಂದ ಕರ್ನಾಟಕ ಸಂಗೀತವನ್ನೇ ಕೇಳಿರಲ್ಲಿಲ್ಲ. ಹಾಗೆ ಸುಮ್ಮನೆ ವರ್ಲ್ಡ್ ಸ್ಪೇಸ್ ಆನ್ ಮಾಡಿದೆ. ಫರ್ಸ್ಟ್ ಕ್ಲಾಸ್ ಲಾಲ್ಗುಡಿ ಜಯರಾಮನ್ ಅವರ ಸಂಗೀತ...ಭೈರವಿ ರಾಗ ಆಲಾಪನೆ ಕೇಳ್ತಾ ಹಾಗೆ ಶ್ರೀ ಕೃಷ್ಣ ಕಾನ್ದಿಮೆಂತ್ಸ್ಇಂದ ತಂದಿದ್ದ ಕೋಡುಬಳೆ ಚಕ್ಕುಲಿ ಪ್ಯಾಕೆಟ್ ಓಪನ್ ಮಾಡಿ ಎರಡು ಪೀಸ್ ಬಾಯಲ್ಲಿ ಹಾಕ್ಕೊಂಡು ಬಹಳದಿನದಿಂದ ಓದ ಬೇಕು ಎಂದು ತಂದಿಟ್ಟಿದ್ದ ಪುಸ್ತಕಗಳನೆಲ್ಲ ಹೊರಗೆ ತೆಗೆದು, ಧೂಳು ಕೊಡವಿ, ಓದಲು ಶುರು ಮಾಡಿದೆ...ಆಮೇಲೆ ರಾತ್ರಿ ನನ್ನದೇ ಸ್ವಯಮ್ ಪಾಕ (ನನ್ನ ಹೆಂಡತಿಗೆ ಹೇಳಬೇಡಿ! ಪ್ಲೀಸ್ ! ) ಅದೊಂಥರ ಆನಂದ. ಹೀಗೆ ಕೆಲವು ದಿನ ಸಂಗೀತ ಕೇಳ್ತಾ, ಕಾದಂಬರಿ ಓದ್ತಾ, ಬಟ್ಟೆ ಒಗೀತಾ ಪಾತ್ರೆ ತೊಳೆಯುತ್ತ, ಅಡುಗೆ ಮಾಡ್ತಾ, ಜೋರಾಗಿ ಹಾಡು ಹೇಳ್ತಾ, ಮೃದಂಗ ನುಡಿಸುತ್ತ ಆರಾಮಾಗಿ ಕಳೆದೆ.ಆಹಾ! ಇದಲ್ಲವ ಅನಂದ ಅಂದರೆ. ನೋಡ್ತಾ ನೋಡ್ತಾ ವಾರ ಕಳೆದೆ ಹೋಯಿತು. ಯಜಮಾನಿ ಯವರು ಮನೆಗೆ ವಾಪಾಸ್. ಯಥಾ ಪ್ರಕಾರ ಅದೇ ಜಂಜಾಟ, ಅದೇ ಟೆನ್ಶನ್, ಅದೇ nagging, ಅದೇ ಧಾರಾವಾಹಿಗಳು,....ಅದಕ್ಕೆ ಅಂತ ಯಾವಾಗಲೂ ಅವರಿಲ್ಲದೆ ಹೋದರೆ ಲೈಫ್ ಬೋರಾಗಿ ಹೋಗತ್ತೆ...Afterall happiness is not everything you see!! ಅವರುಗಳು ನಮಗೋಸ್ಕರ ಪಡುವ ಕಷ್ಟ, ತ್ಯಾಗ, ಇವೆಲ್ಲವನ್ನೂ ನಾವು appreciate ಮಾಡಲೇ ಬೇಕು. ಆದರೆ ಅಪರೂಪಕೋಮ್ಮೆ ಸಿಗುವ freedom ನಲ್ಲೂ ಒಂದು ಆನಂದ ಇದೆ. ಆದರೆ, ಇದನ್ನೆಲ್ಲಾ ದಯವಿಟ್ಟು ನನ್ನ ಹೆಂಡತಿಗೆ ಹೇಳಬೇಡಿ ! ಪ್ಲೀಸ್! ದಮ್ಮಯ್ಯ! - ನಿಮ್ಮ safety ಗೋಸ್ಕರ ನಿಮ್ಮಹೆಂಡತಿಗೂ ಹೇಳಬೇಡಿ.
ಈಗ ಹೇಳಿ ಹೆಂಡತಿ ಯೊಬ್ಬಳು ಮನೆಯಲ್ಲಿ ಇಲ್ಲದೆ ಹೋದರೆ......? ನೀವು ಏನು ಮಾಡುತ್ತೀರಾ?
ಇಂತಿ
ಸಿಂಹ. :)
Sunday, March 1, 2009
Subscribe to:
Posts (Atom)