ಈ ಬರಹ ನನಗೆ ಈ-ಮೈಲ್ನಲ್ಲಿ ನನ್ನ ಗೆಳೆಯನೊಬ್ಬ ಕಳಿಸಿದ್ದು. ಇದರ ಕರ್ತೃ ಯಾರೆಂದು ನನಗೆ ಗೊತ್ತಿಲ್ಲ. ನಮ್ಮಲ್ಲಿ ಬಹಳ ಜನರಿಗೆ ಈ ಅನುಭವ ಆಗಿರಬಹುದು. ಆದ್ದರಿಂದ worth sharing ಅಂಥ ಇಲ್ಲಿ reproduce ಮಾಡ್ತಾ ಇದ್ದೀನಿ.(ಕರ್ತೃವಿನ ಕ್ಷಮೆ ಕೋರಿ....)
ನಾನು, ವೆಂಕ, ಸೀನ - ಆತ್ಮೀಯ ಗೆಳೆಯರು. ಒಂದೇ ರೂಮಿನಲ್ಲಿದ್ದು ಇಂಜಿನಿಯರಿಂಗ್ ಪಾಸು ಮಾಡಿದವರು. ಹುಡುಗಿಯರ ಬಗ್ಗೆ ಹಲವಾರು ಕನಸುಗಳನ್ನು ಹಂಚಿ ಕೊಂಡ ನಮಗೆ ಈಗ ಮದುವೇ ವಯಸ್ಸು.
ಮೊದಲು ಮದುವೆಯಾದವನು ವೆಂಕ. ಮದುವೆಯ ಮಂಟಪದಲ್ಲಿ ಅವನ ಹೆಂಡತಿಯನ್ನು ಪ್ರಥಮ ಬಾರಿಗೆ ನೋಡಿದಾಗ, ಸೀನ ಮತ್ತು ನನಗೆ ಅವಳು ಚೆನ್ನಗಿಲ್ಲವೆನ್ನಿಸಿಬಿಡ್ತು. ನನಗಂತೂ ಅವಳ ಹಲ್ಲುಗಳು ಉಬ್ಬೆನ್ನಿಸಿತು. ಸೀನ ಕೂಡ ಹಲ್ಲೇನೋ ಪರವಾಗಿಲ್ಲ ಆದರೆ ಸೊಂಟ ದಪ್ಪ ಅಂತ ಮೂಗು ಹಿಂಡಿದ. ನಾವೆಲ್ಲ ಕಂಡ ಕನಸಿನ ಕನ್ಯೆಯರಿಗೂ, ಇವಳಿಗೂ ಹೋಲಿಕೆ ಇಲ್ಲವೆಂದು ಇಬ್ಬರು ನಿರ್ಧರಿಸಿದೆವು. ಊಟಕ್ಕೆ ಕುಳಿತಾಗ ಹಾರ ಬಾಸಿನ್ಗಗಳ ಸಮೇತ ನಮ್ಮ ಬಳಿ ಬಂದ ವೆಂಕ " ಹೇಗಿದ್ದಾಳೋ? ಅಂಥ ಕಳಕಳಿಯಿಂದ ಕೇಳಿದ. " ತುಂಬಾ ಚೆನ್ನಾಗಿದ್ದಾಳೆ. ಯು ಅರ್ ಲಕ್ಕಿ..." ಅಂತ ಇಬ್ಬರೂ ಒಟ್ಟಿಗೇ ಹೇಳಿದೆವು. " ಥ್ಯಾಂಕ್ಸ್ ಕಣ್ರೋ.... ನಾಲ್ಕೈದು ಹುಡುಗಿಯರನ್ನ ನೋಡಿದ್ದೇ. ಆದರೆ ಇವಳನ್ನ ನೋಡಿದ ಮೇಲೆ ಬೇರೆ ಹುಡುಗಿಯರನ್ನ ನೋಡಬೇಕು ಅಂತ ಅನ್ನಿಸಲೇ ಇಲ್ಲ " ಅಂತ ಹೆಮ್ಮೆಯಿಂದ ಹೇಳಿಕೊಂಡ. ನಾನು ಸೀನ ಮುಖ ಮುಖ ನೋಡಿ ಕೊಂಡೆವು.
ಮತ್ತೆ ಆರೇ ತಿಂಗಳಲ್ಲಿ ಸೀನನ ಮದುವೆಯೂ ಆಯಿತು. ವಿಚಿತ್ರವೆಂದರೆ ಅವನ ಹೆಂಡತಿಯೂ ನನಗೆ ಚೆನ್ನಗಿಲ್ಲವೆನ್ನಿಸಿತು. ಮೂಗು ಸ್ವಲ್ಪ ಮೊಂಡು! ವೆಂಕನಂತೂ " ಎಂಥ ಖರಾಬ್ ಟೇಸ್ಟ್ ಮಾರಾಯ....ಕಡೇ ಪಕ್ಷ ನನ್ನನಾದರೂ ಒಂದು ಮಾತು ಕೇಳಬಹುದಿತ್ತಲ್ಲ" ಅಂತ ಪೇಚಾಡಿದ. ನಮ್ಮ ಗೊಣಗಾಟ ಏನೇ ಇದ್ದರೂ, ಸೀನ ಬಳಿ ಬಂದಾಗ "ಯು ಅರ್ ಲಕ್ಕಿ" ಅಂತ ಹೇಳಿ ಕೈ ಕುಲುಕಿದೆವು. ಸೀನ ನನ್ನನ್ನೋಬ್ಬನ್ನೇ ಪಕ್ಕಕ್ಕೆ ಕರೆದು " ವೆಂಕನ ತರಹ ಹಾರಿಬಲ್ ಆಯ್ಕೆ ನಂದಲ್ಲ ಅಲ್ವೇನೋ? " ಅಂತ ಕೇಳಿದ. 'ನೋ ನೋ' ಅಂತ ನಾನು ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.
ನಾನಂತೂ ಹುಡುಗಿಯ ಆಯ್ಕೆಯಲ್ಲಿ ಜಾಗರೂಕನಾಗಿದ್ದೆ. ಉಬ್ಬು ಹಲ್ಲು, ದಪ್ಪ ಸೊಂಟ, ಮೊಂಡು ಮೂಗು....ಯಾವುದೂ ಇಲ್ಲವೆಂದು ಖಾತರಿ ಪಡಿಸಿಕೊಂಡೆ. ಆದರೂ ಮದುವೆಯ ದಿನಾ ಗೆಳೆಯರೆನೆನ್ನುವರೋ ಎಂಬ ಆತಂಕದಲ್ಲಿದ್ದೆ. ಪುರೋಹಿತರು, ವೀಡಿಯೊ ದವರೂ, ಬಂಧು ಬಳಗದವರ ಕಣ್ಣು ತಪ್ಪಿಸಿ ಗೆಳೆಯರ ಬಳಿಗೆ ಹೋಗಿ ' ಹೇಗಿದ್ದಾಳೋ'? ಅಂತ ಉದ್ವೇಗದಲ್ಲಿ ಕೇಳಿದೆ. 'ಯು ಅರ್ ಲಕ್ಕಿ....' ಅಂತ ಇಬ್ಬರೂ ನನ್ನ ಕೈ ಕುಲುಕಿದರು. ನನಗೆ ನಂಬಿಕೆಯಾಗಲಿಲ್ಲ. " ಸುಳ್ಳು ಹೇಳಬೇಡ್ರೋ ನಿಜ ಹೇಳಿ... ನನಗೇನೂ ಬೇಜಾರಾಗೊಲ್ಲ" ಅಂತ ಬೇಡಿಕೊಂಡೆ. " ಸುಳ್ಳು ಯಾಕೆ ಹೇಳೋಣ? ನಿಜವಾಗಿಯೂ ನೀನು ಲಕ್ಕಿ ....." ಅಂತ ಮತ್ತೆ ನನ್ನ ಕೈ ಕುಲುಕಿ, ಒಬ್ಬರಿಗೊಬ್ಬರು ಮುಖ ನೋಡಿಕೊಂಡರು. :)
Tuesday, February 10, 2009
Subscribe to:
Post Comments (Atom)
No comments:
Post a Comment